ಉದಯ ಮಾರ್ತಾಂಡ: ತಿರುವಾಂಕೂರಿನ ಒಂದು ಭಾಗವಾದ ವೈನಾಡಿನಲ್ಲಿ 15ನೆಯ ಶತಮಾನದಲ್ಲಿ ರಾಜ್ಯವಾಳಿದ ಚೇರಸಂತತಿಯ ದೊರೆ. ತಿರುವಾಂಕೂರಿನ ಇತಿಹಾಸ ದಲ್ಲಿ ಈತನಷ್ಟು ದೀರ್ಘಕಾಲ ಮತ್ಯಾರೂ ಆಳಿಲ್ಲ. ಈತ ತನ್ನ ರಾಜ್ಯದ ದಕ್ಷಿಣಕ್ಕಿದ್ದ ಪ್ರದೇಶವನ್ನು ಗೆದ್ದು ರಾಜ್ಯವನ್ನು ವಿಸ್ತರಿಸಿದ. ವಳ್ಳಿಯೂರಿನಲ್ಲಿ ಹೆಚ್ಚಾಗಿ ಇರುತ್ತಿದ್ದುದರಿಂದ ರಾಜ್ಯದ ಪೂರ್ವ ಭಾಗದಲ್ಲಿ ಅನೇಕ ಪಾಳೆಯಗಾರರು ದಂಗೆಯೆದ್ದು ಸ್ವಾತಂತ್ರ್ಯವನ್ನು ಘೋಷಿಸಿದರು. ಉದಯ ಮಾರ್ತಾಂಡ ತನ್ನ 28ನೆಯ ವಯಸ್ಸಿನಲ್ಲಿ ಮೃತಪಟ್ಟ (1444).			(ಎಂ.ವಿ.ಎಸ್.ಆರ್.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ